ಕೊಪ್ಪಳ ಕಟ್ಟುವುದು ಅಂತ ಹೇಳುವ ಆಟ ಅದು ಚೆನ್ನೆಮಣೆಯಲ್ಲಿ ಆಡುವ ಆಟ.ತುಳುನಾಡಿನಲ್ಲಿ ಆಟಿ ತಿಂಗಳಿನಲ್ಲಿ ಮಾತ್ರ ಈ ಚೆನ್ನೆ ಮಣೆ ಆಟವನ್ನು ಆಡುವ ಸಂಪ್ರದಾಯ ಇದೇ. ಯಾಕೆಂದರೆ ಆಟಿ ತಿಂಗಳಿನಲಿ ಜೋರಾಗಿ ಮಳೆ ಬರುವ ಕಾರಣ ಯಾವುದೇ ರೀತಿಯಲ್ಲಿ ಕೃಷಿ ಬೇಸಾಯಗಳನ್ನು, ಕೆಲಸಗಳನ್ನು ಮಾಡಲು ಆಗದೆ ಮನೆಯಲ್ಲಿಯೇ ಕೂತು ಹೊತ್ತು ಕಳೆಯಲು ಚೆನ್ನೆಮಣೆ ಆಟವನ್ನು ಆಡುತಿದ್ದರು. ಸೋಣ ಬಂದ ನಂತರ ಮಳೆ ಕಡಿಮೆ ಆದಾಗ ಚೆನ್ನೆಮಣೆ ಯನ್ನು ಅಟ್ಟಕ್ಕೆ ಹಾಕುವುದು ವಾಡಿಕೆ.ಹೆಚ್ಚು ಅಂದರೆ ಅಷ್ಟಮಿ ವರೆಗೆ ಆಡಬಹುದು == ಚೆನ್ನೆಮಣೆಯ ಪರಿಚಯ == ಚೆನ್ನೆಮಣೆ ಯನ್ನು ಒಳ್ಳೆ ಜಾತಿಯ ಮರದಲ್ಲಿ ತಯಾರು ಮಾಡುತ್ತಾರೆ.ಈ ಮಣೆ ಆಯತಾಕಾರದಲ್ಲಿ ಇರುತ್ತದೆ. ಇದರಲ್ಲಿ ಕಾಯಿಗಳನ್ನು ಹಾಕಲು ಗುಳಿಗಳನ್ನು ಮಾಡಿರುತ್ತಾರೆ.ಅದರಲ್ಲಿ ಕಾಯಿಗಳನ್ನು ಹಾಕಿ ಇಡಬಹುದು. ಒಂದೊಂದು ಬದಿಯಲ್ಲಿ ಏಳು ಗುಳಿಗಳು ಇರುತ್ತವೆ. ಆಟದಲ್ಲಿ ಅದನ್ನು ಮನೆ ಅಂತ ಕರೆಯುತ್ತಾರೆ. == ಚೆನ್ನೆಮಣೆಯ ಆಟದ ಉಪಯೋಗ == ಚೆನ್ನೆಮಣೆ ಆಟ ಆಡಿದರೆ ನಮ್ಮ ಮೆದುಳಿನ ಶಕ್ತಿ ಹೆಚ್ಚಾಗುತ್ತದೆ. ಎದುರಾಳಿಯು ಆಡುವ ಆಟವನ್ನು ನೋಡುವಾಗ ನಮ್ಮ ತಲೆಯಲ್ಲೂ ಆಲೋಚನಾ ಶಕ್ತಿಯು ಹೆಚ್ಚಾಗುತ್ತದೆ. ಚೆನ್ನೆಮಣೆ ಆಡುವಾಗ ಹೊತ್ತು ಹೋದದ್ದೇ ತಿಳಿಯುವುದಿಲ್ಲ. ಮನಸಿಗೆ ಶಾಂತಿ ದೊರೆಯುತ್ತದೆ. ಮನೆಯವರು, ನೆರೆಮನೆಯವರು ಹೀಗೆ ಎಲ್ಲರೂ ಸೇರಿ ಆಡುವಾಗ ಸಾಮಾಜಿಕ ಬಾಂದವ್ಯ ಹೆಚ್ಚಾಗುತ್ತದೆ. ಚೆನ್ನೆಮಣೆ ಯಲ್ಲಿರುವ ಗುಳಿ(ಮನೆಯಿಂದ )ಕಾಯಿ ಹೆಕ್ಕಲು ಬೆರಳು ಹಾಕುವಾಗ ಬೆರಳಿನ ತುದಿಗೆ ಬಲ ಬಿದ್ದಾಗ ಅದು ಶಕ್ತಿ ಕೇಂದ್ರದ ಮೇಲೆ ಒತ್ತಡ ಬಿದ್ದು ರಕ್ತ ಸಂಚಾರ ಸರಾಗವಾಗಿ ಆಗುತ್ತದೆ. ಇದರಿಂದ ನಮ್ಮ ಶರೀರಕ್ಕೆ ಆರೈಕೆ ಸಿಗುತ್ತದೆ. == ಆಟಕ್ಕೆ ಬೇಕಾದ ವಸ್ತುಗಳು == ಈ ಆಟಕ್ಕೆ ಚೆನ್ನೆಮಣೆ ಮತ್ತು ಆಟ ಆಡಲು ಕಾಯಿಗಳು ಬೇಕು.ಸಾಮಾನ್ಯವಾಗಿ ಮಂಜೊಟ್ಟಿ ಕಾಯಿಗಳಲ್ಲಿ ಆಡುತ್ತಾರೆ. ಆ ಕಾಯಿ ಇಲ್ಲಾಂದ್ರೆ, ಹುಣಸೆ ಹಣ್ಣಿನ ಬೀಜ (ಪುಳಿಂಕಟೆ )ಇದರಲ್ಲಿ ಆಡುತ್ತಾರೆ. ಈ ಆಟ ಆಡಲು ಎರಡು ಜನ ಬೇಕಾಗುತ್ತದೆ == ಆಟ ಆಡುವ ವಿಧಾನ == ಕೊಪ್ಪಳ ಕಟ್ಟ್ ಆಟ ಆಡುವ ವಿಧಾನ ಹೇಗೆ ಅಂದರೆ ಚೆನ್ನೆಮಣೆ ಯನ್ನು ಎದುರಿಗೆ ಇಟ್ಟು, ಆಟ ಆಡುವವರು ಎದುರು ಬದುರಾಗಿ ಕುಳಿಕೊಳ್ಳಬೇಕು. ಎಲ್ಲಾ ಗುಳಿ (ಮನೆಗೆ )ನಾಲ್ಕು ನಾಲ್ಕು ಮಂಜೊಟ್ಟಿ ಕಾಯಿಳನ್ನು ಹಾಕಬೇಕು. ಒಂದು ಬದಿಯ ಏಳು ಮನೆ ಒಬ್ಬನಿಗೆ ಇನ್ನೊಂದು ಬದಿಯ ಏಳು ಮನೆ ಇನ್ನೊಬ್ಬನಿಗೆ, ಮೊದಲಿಗೆ ಆಟ ಸುರು ಮಾಡುವವನು ಅವನ ಏಳು ಮನೆಯಲ್ಲಿ ನಡುವಿನ ಮನೆಯಿಂದ ಕಾಯಿ ತೆಗೆದು ಎಲ್ಲಾ ಮನೆಗಳಿಗೆ ಒಂದೊಂದು ಕಾಯಿ ಹಾಕಿಕೊಂಡು ಹೋಗಬೇಕು.ನಾಲ್ಕು ಕಾಯಿ ಹಾಕಿದ ನಂತರ ಅದೇ ಮನೆಯ ಕಾಯಿಯನ್ನು ತೆಗೆದು ಹಾಕಿಕೊಂಡು ಬರ್ಬೇಕು.ಹೀಗೆ ಹಾಕಿಕೊಂಡು ಬರುವಾಗ ಒಂದು ನಡು ಮನೆಯಲ್ಲಿ ಮೂರು ಕಾಯಿ ಇದ್ದು ಅದಕ್ಕೆ ಒಂದು ಕಾಯಿ ಹಾಕಿದರೆ ಅದು ಕೊಪ್ಪಳ ಕಟ್ಟಿದ್ದು ಎಂದರ್ಥ. ನಂತರ ಅದನ್ನು ತೆಗೆಯುವ ಹಾಗಿಲ್ಲ. ಅದಕ್ಕೆ ಕಾಯಿ ಗಳನ್ನೂ ಹಾಕಿ ತುಂಬಿಸಬೇಕು. ನಂತರ .ಎರಡು ಮನೆ ಖಾಲಿ ಇದ್ದರೆ ಆಟ ಆಡಲಿಕೆ ಇಲ್ಲ ಅದಕ್ಕೆ( ಕುಲ್ಲುನೆ )ಕುಳಿತುಕೊಳ್ಳುವುದು ಅಂತ ಹೇಳ್ತಾರೆ. ನಂತರ ಇನ್ನೊಬ್ಬ ಅವನ ಮನೆಯಿಂದ ಕಾಯಿಗಳನ್ನು ತೆಗೆದು ಆಟ ಸುರು ಮಾಡ್ಬೇಕು. ಮೊದಲಿನವನು ಆಡಿದ ರೀತಿಯಲ್ಲೇ ಆಡಬೇಕು.ಹಾಗೇ ಆಡುವಾಗ ಅವನಿಗೂ ಒಂದು ನಡುವಿನ ಮನೆಯಲ್ಲಿ ಮೂರು ಕಾಯಿ ಇದ್ದು ಅದಕ್ಕೆ ಇನ್ನೊಂದು ಕಾಯಿ ಬಿದ್ದರೆ ಅವನೂ ಕೊಪ್ಪಳ ಕಟ್ಟಿದ ಹಾಗೇ. ಅದಕ್ಕೆ ಪ್ರತಿ ಸರ್ತಿ ಆಡುವಾಗ ಕಾಯಿಗಳನ್ನು ಹಾಕಿ ಕೊಂಡು ಹೋಗಬೇಕು.ಎರಡು ಮನೆ ಖಾಲಿ ಆದರೆ ಆಡಲು ಇಲ್ಲ ಕುಲ್ಲುನೆ ಅಂತ ಹೇಳ್ತಾರೆ. ಹೀಗೆ ಆಟ ಆಡಿ ಎಲ್ಲಾ ಮನೆಯ ಕಾಯಿ ಮುಗಿದ ಮೇಲೆ ಆಟ ಮುಗಿಯುತ್ತದೆ. ಆಮೇಲೆ ಅವರವರ ಕೊಪ್ಪಲ ಕಟ್ಟಿದ ಮನೆಯಲ್ಲಿ ಸಿಕ್ಕಿದ ಕಾಯಿಗಳನ್ನು ಅವರವರ ಮನೆಗಳಿಗೆ ತುಂಬಿಸಬೇಕು.ಎಲ್ಲಾ ಮನೆಗೆ ಕಾಯಿ ತುಂಬಿಸಲು ಇಲ್ಲಾಂದ್ರೆ ಆ ಖಾಲಿ ಮನೆಗೆ ಪೇಪರ್ ತುಂಡು ಹಾಕಿ ಇಡಬೇಕು.ಆ ಮನೆಗೆ ಸೂ( ಬೆಂಕಿ )ಬಿತ್ತು ಅಂತ ಹೇಳ್ತಾರೆ.ಹಾಗೇ ಎಲ್ಲಾ ಮನೆಗೆ ಬೆಂಕಿ ಬಿದ್ದವರು ಸೋತರು ಅಂತ ಅರ್ಥ. == ಉಲ್ಲೇಕೊ ==